ಎಲ್ಲಾ ಲೇಖನಗಳಿಗೆ ಹೋಗಿ ಡೆಂಗಿ ವಿರುದ್ಧ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಹೇಗೆ

ಡೆಂಗಿ ವಿರುದ್ಧ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಹೇಗೆ

ಸೊಳ್ಳೆಗಳಿಂದ ಉಂಟಾಗುವ ಅತ್ಯಂತ ಅಪಾಯಕಾರಿ ಕಾಯಿಲೆಗಳಲ್ಲಿ ಡೆಂಗಿ ವೈರಸ್ ಒಂದಾಗಿದ್ದು ಸೂಕ್ತ ಕಾಳಜಿ ವಹಿಸಿದರೆ ಇದನ್ನು ತಡೆಗಟ್ಟಬಹುದು. ಈ ರೋಗದಿಂದ ಸುರಕ್ಷಿತವಾಗಿರಲು ಸರಳವಾದ ಮಾರ್ಗವೆಂದರೆ ಸೊಳ್ಳೆಗಳು ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಯದಂತೆ ನೋಡಿಕೊಳ್ಳುವುದು.

1. ನಿಮ್ಮ ಮನೆಯನ್ನು ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾದ ಇರಿಸಿಕೊಳ್ಳಿ.

2. ಮನೆಯೊಳಗೆ ಅಥವಾ ಸುತ್ತಮುತ್ತ ಎಲ್ಲಿಯೂ ನಿಂತ ನೀರು ಇರದಂತೆ ನೋಡಿಕೊಳ್ಳಿ.

3. ಅಡಗಿರುವ ಸೊಳ್ಳೆಗಳನ್ನು ಕೊಲ್ಲಲು ನಿಮ್ಮ ಮನೆಯ ಮೂಲೆಗಳಲ್ಲಿ ಪ್ರತಿದಿನ ಕಾಲಾ ಹಿಟ್ ನಂತಹ ಸೊಳ್ಳೆ-ವಿರೋಧಿ ದ್ರವಗಳನ್ನು ಸ್ಪ್ರೇ ಮಾಡಿ.

4. ನಿಮ್ಮ ಒದ್ದೆ ಕಸವನ್ನು ಪ್ರತ್ಯೇಕವಾಗಿರಿಸಿ, ಒದ್ದೆ ಕಸದ ತೊಟ್ಟಿಯಲ್ಲಿ ಎಸೆಯಿರಿ (ಇದು ಮುಚ್ಚಿರಬೇಕು)

5. ಮಳೆಯಲ್ಲಿ, ನಿಂತ ನೀರು, ಅದರಲ್ಲೂ ಶುದ್ಧ ನೀರು ಹೆಚ್ಚಾಗುವುದರಿಂದ ನೀವು ಡೆಂಗಿ/ಸೊಳ್ಳೆಯ ಮೂಲಕ ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು; ಈ ಹಂತದಲ್ಲಿ ಸುರಕ್ಷತೆಯ ಎಲ್ಲಾ ಕ್ರಮಗಳನ್ನು ಬಳಸಬೇಕು.

6. ಚರ್ಮದ ಯಾವುದೇ ಪ್ರದೇಶಗಳನ್ನು ಹೊರಗಿಡದಂಥ ಬಟ್ಟೆಗಳನ್ನು ಧರಿಸಲು ಪ್ರಯತ್ನಿಸಿ.

7. ಒಂದು ಸೊಳ್ಳೆ ನಿವಾರಕ ಕ್ರೀಮ್ ಹಚ್ಚಿಕೊಳ್ಳಿ ಮತ್ತು ಎಲ್ಲಾ ಸಮಯದಲ್ಲೂ ಅದನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ.

8. ವಿಶೇಷವಾಗಿ ಮುಂಜಾನೆ ಮತ್ತು ಸಂಜೆ ಸಮಯದಲ್ಲಿ ಮನೆ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿ.

9. ಒಂದು ದಿನ ಬಳಕೆಯ ನಂತರ ನಿಮ್ಮ ಕೈ ಟವೆಲ್ಲುಗಳನ್ನು ಬದಲಾಯಿಸಿ.

10. ಒಣ ಉಡುಪುಗಳಿಂದ ನಿಮ್ಮ ತೇವಯುತ ಮತ್ತು ಒದ್ದೆ ಬಟ್ಟೆಗಳು ಹಾಗೂ ಷೂಗಳನ್ನು ದೂರವಿಡಿ. ಸಾಧ್ಯವಾದಷ್ಟು ಬೇಗ ಒದ್ದೆಯಾದವುಗಳನ್ನು ಒಣಗಿಸಲು ಪ್ರಯತ್ನಿಸಿ.

11. ನಮ್ಮ ಮನೆಗಳನ್ನು ಮಾತ್ರವಲ್ಲ, ನಮ್ಮ ಪ್ರದೇಶ ಮತ್ತು ನಗರವನ್ನು ಕೂಡ ಸ್ವಚ್ಛವಾಗಿರಿಸಿಕೊಳ್ಳಬೇಕು. ಅಲ್ಲಿ ಸ್ವಚ್ಛಗೊಳಿಸಲಾಗದ ಕೊಳಕು ನಿಮಗೆ ಕಾಣಿಸಿದರೆ, ಅದಕ್ಕೆ ಏನಾದರೂ ಪರಿಹಾರವನ್ನು ಕಂಡುಹಿಡಿಯಿರಿ. ನಿಮ್ಮ ಸ್ಥಳೀಯ 'ನಿವಾಸಿಗರ ಕ್ಷೇಮಾಭಿವೃದ್ಧಿ ಸಂಘಟನೆ' ಅಥವಾ ಸಮುದಾಯದ ಮುಖ್ಯಸ್ಥರಿಗೆ ಅದನ್ನು ತಿಳಿಸಿ.

ಸಂಬಂಧಿತ ಉತ್ಪನ್ನಗಳನ್ನು ಅನ್ವೇಷಿಸಿ

kala-hit
hit-anti-mosquito-racquet
ಕೀಟಗಳೆದುರು ಹೋರಾಡುವ ಸರಿಯಾದ ಮಾರ್ಗ

ನಿಮ್ಮ ಮನೆಯನ್ನು ಕೀಟರಹಿತಗೊಳಿಸುವುದಕ್ಕೆ ಸಲಹೆ ಸೂಚನೆಗಳು!

  • ಡೆಂಗಿ
  • ಚಿಕೂನ್ಗುನ್ಯಾ
  • ಮಲೇರಿಯಾ
  • ಜಿರಳೆಗಳನ್ನು
  • ಮಾಸಿಕ ಅಡಿಗೆ ಸ್ವಚ್ಛಗೊಳಿಸುವಿಕೆ
  • ಇಲಿ