ಎಲ್ಲಾ ಲೇಖನಗಳಿಗೆ ಹೋಗಿ ಡೆಂಗಿ ಮತ್ತು ಚಿಕುನ್ ಗುನ್ಯಾ ನಡುವಿನ ಸಾಮ್ಯತೆ

ಡೆಂಗಿ ಮತ್ತು ಚಿಕುನ್ ಗುನ್ಯಾ ನಡುವಿನ ಸಾಮ್ಯತೆ

ಮುಂಗಾರಿನ ಆರಂಭವು ಜನರಿಗೆ ಜುಲೈ ತಿಂಗಳ ಬಿರು ಬಿಸಿಲಿನ ತಾಪದಿಂದ ಮುಕ್ತಿ ನೀಡುವುದಷ್ಟೇ ಅಲ್ಲ, ಸಾಕಷ್ಟು ರೋಗಗಳನ್ನು ಕೂಡ ತರುತ್ತದೆ. ಡೆಂಗಿ ಮತ್ತು ಚಿಕುನ್ ಗುನ್ಯಾ ಪ್ರಕರಣಗಳ ಹೆಚ್ಚಳವು ಕಳೆದ ವರ್ಷಗಳಲ್ಲಿ ಗಾಬರಿ ಹುಟ್ಟಿಸುವ ಮಟ್ಟಕ್ಕೆ ಬೆಳೆಯಿತು ಮತ್ತು ಎಚ್ಚರಿಕೆಯ ಕರೆಗಂಟೆ ಒತ್ತಿತು.

1. ಹುಟ್ಟು

ಐತಿಹಾಸಿಕವಾಗಿ, ಚಿಕುನ್ ಗುನ್ಯಾವನ್ನು ಡೆಂಗಿ ಎಂದು ಉಲ್ಲೇಖಿಸಲಾಗಿದೆ. ಇದು ತಾಂಜಾನಿಯದ ಮಾಕೊಂಡೆ ಪ್ರಸ್ಥಭೂಮಿಯಲ್ಲಿ ಚಿಕುನ್ ಗುನ್ಯಾದ ಪ್ರಸರಣದ ನಂತರ ಅದನ್ನು ಪ್ರತ್ಯೇಕ ಕಾಯಿಲೆ ಎಂದು ಗುರುತಿಸಲಾಯಿತು.

ಡೆಂಗಿ ಜ್ವರ ಒಂದು ಸೊಳ್ಳೆಯಿಂದ ಹರಡುವ ರೋಗ. ಇದು ಎಯ್ಡೀಸ್ ಸೊಳ್ಳೆಯ ಹಲವಾರು ಪ್ರಭೇದಗಳಿಂದ ಹರಡುತ್ತದೆ. ಎರಡನೇ ವಿಶ್ವ ಸಮರದ ನಂತರ ಡೆಂಗಿ ಎಂಬುದು ಸಾವಿನ ಪ್ರಮುಖ ಜಾಗತಿಕ ಕಾರಣವಾಗಿದೆ.

ಅಂತೆಯೇ, ಚಿಕುನ್ ಗುನ್ಯಾ ಸೋಂಕು ಚಿಕುನ್ ಗುನ್ಯಾ ವೈರಸ್ಸಿನಿಂದ ಉಂಟಾಗುತ್ತದೆ. ಈ ವೈರಸ್ ಒಂದೇ ವಿಧದ ಎಯ್ಡೀಸ್ ಸೊಳ್ಳೆಗಳ ಎರಡು ಪ್ರಭೇದಗಳಿಂದ ಪ್ರಸರಣಗೊಳ್ಳುತ್ತದೆ. 1953 ರಲ್ಲಿ ಆರ್. ಡಬ್ಲ್ಯೂ. ರಾಸ್ ಅವರು ಚಿಕುನ್ ಗುನ್ಯಾ ವೈರಸ್ ಅನ್ನು ಪ್ರತ್ಯೇಕಿಸಿದರು. ಭಾರತದಲ್ಲಿ, ವಿಶೇಷವಾಗಿ ಉತ್ತರ ಭಾರತದಲ್ಲಿ, ಚಿಕುನ್ ಗುನ್ಯಾವು ಎಂದೂ ಡೆಂಗಿಗಿಂತಲೂ ಆತಂಕದ ಕಾರಣವೆನಿಸಿರಲಿಲ್ಲ. ಆದರೆ 2016 ರ ವರ್ಷದಲ್ಲಿ, ಚಿಕುನ್ ಗುನ್ಯಾ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂತು.

2. ಸಾಮಾನ್ಯತೆ

ಡೆಂಗಿ ಮತ್ತು ಚಿಕುನ್ ಗುನ್ಯಾ ಇವೆರಡೂ ಉಷ್ಣವಲಯದ ಜ್ವರಗಳಾಗಿದ್ದು ರೋಗಲಕ್ಷಣಗಳು, ವಾಹಕಗಳು, ಅವುಗಳ ಕಾವಿನ ಅವಧಿ, ಭೌಗೋಳಿಕ ವಿತರಣೆ ಇತ್ಯಾದಿಗಳಲ್ಲಿ ಸಾಮಾನ್ಯತೆಯಿದೆ.

ಉದಾಹರಣೆಗೆ ಇವೆರಡೂ ಸೊಳ್ಳೆಯಿಂದ ಹರಡುವ ವೈರಸ್ ರೋಗಗಳು, ಅವುಗಳ ವಾಹಕಗಳು ಎಯ್ಡೀಸ್ ಪ್ರಭೇದದ ಸೊಳ್ಳೆಗಳು.

ಎರಡೂ ವೈರಸ್ ಸೋಂಕುಗಳೂ ಏಕಪ್ರಕಾರದ ಚಿಹ್ನೆಗಳಾದ ಅಧಿಕ ಜ್ವರ, ತಲೆನೋವು, ಕೀಲುಗಳು ಮತ್ತು ಕಣ್ಣುಗಳ ನೋವು, ದದ್ದುಗಳು ಮತ್ತು ಆಲಸ್ಯದ ಲಕ್ಷಣಗಳನ್ನು ಒಳಗೊಂಡಿವೆ. ಇದನ್ನು ಸಾಮಾನ್ಯವಾಗಿ ವೈರಸ್ ಜ್ವರ ಮತ್ತು ಮಲೇರಿಯಾದೊಂದಿಗೆ ಗೊಂದಲ ಮಾಡಿಕೊಳ್ಳಲಾಗುತ್ತದೆ.

ಈ ಎರಡೂ ಅಪಾಯಕಾರಿ ರೋಗಗಳನ್ನು ತಡೆಗಟ್ಟಲು ಪ್ರತಿಬಂಧಕತೆಯೇ ರಾಮಬಾಣ. ಮತ್ತು ಈ ವಿಷಯದಲ್ಲಿ ಕಾಲಾ ಹಿಟ್ ನಿಮಗೆ ಸಹಾಯ ಮಾಡುತ್ತದೆ. ಸೊಳ್ಳೆಯಿಂದ ಹಬ್ಬುವ ಕಾಯಿಲೆಯನ್ನು ನಿರ್ಮೂಲನಗೊಳಿಸಲು ಕಾಲಾ ಹಿಟ್ ಅನ್ನು ಪ್ರತಿದಿನ ಸ್ಪ್ರೇ ಮಾಡಿ.

ಸಂಬಂಧಿತ ಉತ್ಪನ್ನಗಳನ್ನು ಅನ್ವೇಷಿಸಿ

kala-hit
hit-anti-mosquito-racquet
ಕೀಟಗಳೆದುರು ಹೋರಾಡುವ ಸರಿಯಾದ ಮಾರ್ಗ

ನಿಮ್ಮ ಮನೆಯನ್ನು ಕೀಟರಹಿತಗೊಳಿಸುವುದಕ್ಕೆ ಸಲಹೆ ಸೂಚನೆಗಳು!

  • ಡೆಂಗಿ
  • ಚಿಕೂನ್ಗುನ್ಯಾ
  • ಮಲೇರಿಯಾ
  • ಜಿರಳೆಗಳನ್ನು
  • ಮಾಸಿಕ ಅಡಿಗೆ ಸ್ವಚ್ಛಗೊಳಿಸುವಿಕೆ
  • ಇಲಿ