ಆಂಟಿ ರೋಚ್ ಜೆಲ್ ಬಳಸುವ ಸರಿಯಾದ ವಿಧಾನ
ನಿಮ್ಮ ಮನೆಯಲ್ಲಿ ಜಿರಳೆಯಿಂದ ಮುಕ್ತಿ ಪಡೆಯಲು ಸಮಸ್ಯೆ ಎದುರಿಸುತ್ತಿದ್ದೀರಾ? ನೀವು ಒಂಟಿಯಲ್ಲ. ಇಡೀ ವಿಶ್ವದಲ್ಲಿ, ಜಿರಳೆಗಳು ಅತ್ಯಂತ ಸಾಮಾನ್ಯಗ್ರಹ ಕೀಟಗಳು.
ಜಿರಳೆಗಳು ವಿವಿಧ ಕಾರಣಗಳಿಗಾಗಿ ನಿಮ್ಮ ಮನೆಯ ಒಳಗೆ ಬರುತ್ತವೆ. ಸಾಮಾನ್ಯ ಕಾರಣವೆಂದರೆ ಆಹಾರ, ವಸತಿ ಅಥವಾ ನೀರಿಗಾಗಿ. ಒಮ್ಮೆ ಜಿರಳೆಗಳು ಒಂದು ಪ್ರದೇಶಕ್ಕೆ ಬಂದು ತಳ ಊರಿದರೆ, ತ್ವರಿತವಾಗಿ ಇವು ದುಪ್ಪಟ್ಟಾಗುತ್ತವೆ ಮತ್ತು ನಿಮ್ಮ ಅನುಕೂಲ ಹಾಗೂ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡುತ್ತವೆ.
ಹಿಟ್ ಆಂಟಿ ರೋಚ್ ಜೆಲ್ ಎಂಬುದು ನಿಮ್ಮ ಮನೆಯಿಂದ ಜಿರಳೆಯ ಜಾಲವನ್ನು ನಿವಾರಿಸುವ ಒಂದು ಆಯ್ಕೆ. ಜೆಲ್ ಅತ್ಯಂತ ನವೀನ ವಿಧಾನವಾಗಿದ್ದು, ಇದನ್ನು ತಿನ್ನಲು ಜಿರಳೆಗಳನ್ನು ಆಕರ್ಷಿಸುತ್ತದೆ. ಜಿರಳೆಗಳು ಜೆಲ್ ತಿನ್ನುತ್ತವೆ ಮತ್ತು ತಮ್ಮ ಗೂಡಿಗೆ ತೆರಳಿ ಸಾಯುತ್ತವೆ. ಜಿರಳೆಗಳು ಜೆಲ್ ತಿನ್ನುತ್ತವೆ ಮತ್ತು ತಮ್ಮ ಗೂಡಿಗೆ ತೆರಳಿ ಸಾಯುತ್ತವೆ. ಜಿರಳೆಗಳನ್ನು ಸಾಯಿಸಲು ಇದು ಅತ್ಯಂತ ಪರಿಣಾಮಕಾರಿ, ಸುರಕ್ಷಿತ ಹಾಗೂಸುಲಭ ವಿಧಾನವಾಗಿದೆ. ಆದಾಗ್ಯೂ, ಇದರ ಪರಿಣಾಮವನ್ನು ನೀವು ಗರಿಷ್ಟ ಪ್ರಮಾಣದಲ್ಲಿ ಹೆಚ್ಚಿಸ ಬೇಕೆಂದರೆ, ಜೆಲ್ ಅನ್ನು ಸರಿಯಾಗಿ ಬಳಸುವುದು ಅತ್ಯಂತಮುಖ್ಯ. ಆಂಟಿ ರೋಚ್ ಜೆಲ್‌ಅನ್ನು ಮನೆಯಲ್ಲಿ ಬಳಸುವ ಸರಿಯಾದ ವಿಧಾನಗಳನ್ನು ನಾವು ಇಲ್ಲಿ ನಿಮಗೆ ನೀಡುತ್ತಿದ್ದೇವೆ:
1) ಇದನ್ನು ಮೊದಲ ಬಾರಿಗೆ ಬಳಸುವಾಗ – ಜೆಲ್ ಅನ್ನು ಮೊದಲ ಬಾರಿಗೆ ನೀವು ಬಳಸುವಾಗ, ಜೆಲ್ ಹೊರಬರಲು ಟ್ಯೂಬನ್ನು 7-8 ಬಾರಿ ನೀವು ಕ್ಲಿಕ್ ಮಾಡಬೇಕಾಗಬಹುದು. ಟ್ಯೂಬ್ ಸರಿಯಾಗಿ ತೆರೆದ ನಂತರ, ಜೆಲ್ ಹೊರಬರಲು ಆರಂಭಿಸುತ್ತದೆ. ನಂತರ ಒಂದೇ ಕ್ಲಿಕ್‌ಗೆ ಜೆಲ್ ಹೊರಬರುತ್ತದೆ.
2) ಹಚ್ಚುವುದು ಹೇಗೆ – ನಿಮ್ಮ ಪೀಠೋಪಕರಣ ಅಥವಾ ಇತರ ಸಾಮಗ್ರಿಗಳಿಂದ 5 ರಿಂದ 10 ಸೆಂ.ಮೀ ದೂರದಲ್ಲಿ ಜೆಲ್ ಚುಕ್ಕೆಗಳನ್ನು ಇಡುವಂತೆ ಶಿಫಾರಸು ಮಾಡಲಾಗಿದೆ. ನಿಮ್ಮ ಅಡುಗೆ ಮನೆಯ ಒಣ ಜಾಗದಲ್ಲಿ ಮಾತ್ರ ಕನಿಷ್ಠ 20 ಚುಕ್ಕೆಗಳನ್ನು ಇಡಿ.
3) ನಿಮ್ಮ ಅಡುಗೆ ಮನೆಯ ಒಣ ಜಾಗದಲ್ಲಿ ಮಾತ್ರ ಕನಿಷ್ಠ 20 ಚುಕ್ಕೆಗಳನ್ನು ಇಡಿ. ಜಿರಳೆಗಳ ಸಮಸ್ಯೆ ಹೆಚ್ಚಿದೆ ಎಂದು ನೀವು ಭಾವಿಸುವ ಸ್ಥಳದಲ್ಲಿ ಜೆಲ್ ಚುಕ್ಕೆಗಳನ್ನು ಇಡಿ. ಹಚ್ಚಬಹುದಾದ ಇತರ ಪ್ರದೇಶಗಳೆಂದರೆ ಫ್ರಿಜ್ ಮತ್ತು ಮೈಕ್ರೋವೇವ್‌ಗಳ ಅಡಿಯಲ್ಲಿ, ನಿಮ್ಮ ಅಡುಗೆ ಮನೆಯ ಸಿಂಕ್‌ನ ಕೆಳಗೆ, ಗ್ಯಾಸ್ ಸಿಲಿಂಡರ್‌ನ ಕೆಳಗೆ ಮತ್ತು ಮನೆಯ ಇತರ ಮೂಲೆಗಳು.
4) ಹಚ್ಚ ಬಾರದ ಪ್ರದೇಶಗಳು – ಜೆಲ್ ಅನ್ನು ಒದ್ದೆ ಪ್ರದೇಶಗಳಲ್ಲಿ ಹಚ್ಚಬೇಡಿ. ಹಾಗೆಯೇ, ನೀರು ಹರಿಯಬಹುದಾದ ಪ್ರದೇಶಗಳಿದ್ದರೆ, ಅಲ್ಲಿ ಕೂಡಾ ಜೆಲ್ ಹಚ್ಚಬಾರದು. ಜೆಲ್ ಸುಲಭವಾಗಿ ತೊಳೆದುಹೋಗಬಾರದು ಎಂಬುದೇ ಈ ಮುನ್ನೆಚ್ಚರಿಕೆಯ ಉದ್ದೇಶವಾಗಿದೆ.
5) ಯಾವಾಗ ಪುನಃ ಹಚ್ಚಬೇಕು – ಉತ್ತಮ ಫಲಿತಾಂಶಕ್ಕಾಗಿ, ಈ ಪ್ರಕ್ರಿಯೆಯನ್ನು ನಿಮ್ಮ ಮನೆಯಲ್ಲಿ 45 ದಿನಗಳಿಗೊಮ್ಮೆ ಪುನರಾವರ್ತನೆ ಮಾಡಬೇಕು.
ಆಂಟಿ ರೋಚ್ ಜೆಲ್ ಎಂಬುದು ಅತ್ಯಂತ ಅನುಕೂಲಕರವಾದದ್ದಾಗಿದೆ. ಇದು ದುರ್ಗಂಧ ರಹಿತ. ಹೀಗಾಗಿ ಹಚ್ಚುವ ವೇಳೆ ಮತ್ತು ನಂತರ ಯಾವುದೇ ಆಸ್ವಸ್ಥತೆಯನ್ನು ಸೃಷ್ಟಿಸುವುದಿಲ್ಲ. ಸಾಮಾನ್ಯವಾಗಿ, ಅಡುಗೆ ಮನೆಯಲ್ಲೇ ಜಿರಳೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುತ್ತವೆ. ಇಲ್ಲಿ ಅವುಗಳಿಗೆ ಆಹಾರ ಮತ್ತು ನೀರು ಸುಲಭವಾಗಿ ಸಿಗುತ್ತದೆ. ಕೇವಲ 5 ನಿಮಿಷಗಳಲ್ಲಿ, ನಿಮ್ಮ ಅಡುಗೆ ಮನೆಯಲ್ಲಿ 20 ಕ್ಕೂ ಹೆಚ್ಚು ಚುಕ್ಕೆಗಳನ್ನು ಇಡಬಹುದು. ಜೆಲ್ ಹಚ್ಚಿದ ನಂತರ, ನಿಮ್ಮ ಮನೆಯಲ್ಲಿನ ಜಿರಳೆಗಳ ಇಡೀ ಸಂತಾನವು ತನ್ನಿಂತಾನೇ ನಾಶವಾಗುವುದರಿಂದ ನೀವು ನಿರಾಳವಾಗಿರಬಹುದು.
ನಿಮ್ಮ ಮನೆಯನ್ನು ಕೀಟರಹಿತಗೊಳಿಸುವುದಕ್ಕೆ ಸಲಹೆ ಸೂಚನೆಗಳು!